ಮಲೆನಾಡು (Malenadu) Akshay Bhat Thirthahalli


*ಮಲೆನಾಡು*

ಸ್ವರ್ಗಕ್ಕೂ ಮಿಗಿಲಾದ ಸುಂದರ ಪ್ರಕೃತಿ ಹೊಂದಿರುವುದು ನಮ್ಮ ಮಲೆನಾಡು
ಸ್ವರ್ಗವೇ ಧರೆಗಿಳಿದು ಬಂದಂತೆ ಕಾಣುವುದು ನಮ್ಮ ಮಲೆನಾಡು
ಎತ್ತ ಸಾಗಿದರು ಸುತ್ತಲು ಹಚ್ಚ ಹಸಿರಿನ ಕಾಡು
ಕಾಡು ಮಧ್ಯದಲ್ಲಿ ಜನ ಸಾಮಾನ್ಯರ ಪುಟ್ಟಗೂಡು
ತೋಟ ಗದ್ದೆಗಳೇ ಅವರಿಗೆ ಹೊಟ್ಟೆಪಾಡು
ಗದ್ದೆ ತಿನ್ನಲು ಬಂದಾಗ ರಾತ್ರಿಯಲ್ಲಿ ಶಿಕಾರಿಗೆ ಹುಡುಕುವರು ಪ್ರಾಣಿಗಳ ಜಾಡು
ಇದುವೇ ನಮ್ಮ ಮಲೆನಾಡು ಇದು ನಮ್ಮ ಮಲೆನಾಡು.
ಮಲೆನಾಡಿಗರ ಜೀವಜಲ ತುಂಗಾ ನದಿ
ಹಲವು ಪುಣ್ಯಕ್ಷೇತ್ರ ಗಳಿರುವುದು ಅದರ ಬದಿ
ವರ್ಷಕ್ಕೊಮ್ಮೆ ಆಗುವುದು ಪುಣ್ಯಕ್ಷೇತ್ರಗಳಲಿ ಜಾತ್ರೆ ನೋಡಬರುವರು ಜನರು ದೇವರ ರಥದ ಯಾತ್ರೆ
ಸಂಸ್ಕೃತಿ ಸಾಹಿತ್ಯ ಸಂಸ್ಕಾರಕ್ಕೆ ಮಲೆನಾಡು ಅಕ್ಷಯ ಪಾತ್ರೆ 
ಇಲ್ಲಿನ ಸೊಬಗ ಸವಿಯ ಬಂದವರಿಗೆ ಸಿಗುವುದು ಕಹಿಯಲ್ಲ ಸಿಹಿಯ ಮಾತ್ರೆ 
ಇದುವೇ ನಮ್ಮ ಮಲೆನಾಡು ಇದು ನಮ್ಮ ಮಲೆನಾಡು.
     Akshay bhat gl thirthahalli

Comments

Post a Comment

Popular posts from this blog

ನಮ್ ಹಳ್ಳಿ ಲೈಫ್ (Namm Halli Life ) by Nikhil . GM. Gowda

ಮಾಯ ಜಿಂಕೆ (Maaya Jinke)

ಮಲೆನಾಡು(Malenadu ) by Nikhil GM gowda