ಬಾಲ್ಯದ ಆ ದಿನಗಳು (Baalyada Aa Dinagalu by Nikhil GM Gowda
😘😍ನೋಡ ನೋಡ ಎಂತ ಚಂದ ಅಲಾ ಬಾಲ್ಯದ ದಿನಗಳು😍😘 ನಮ್ಮ ಬಾಲ್ಯದ ನೆನಪುಗಳು ಅವಿಸ್ಮರಣೀಯ,ಅಮೂಲ್ಯ, ಆನಂದಕರ,ಅಧ್ಬುತ..... ಹೌದು ನಮ್ಮ ಆ ದಿನಗಳು ತುಂಬಾ ಚೆನ್ನಾಗಿತ್ತು , ಬಾಲ್ಯ ಮನುಷ್ಯ ಜೀವನದ ಒಂದು ಸುಂದರ ಅನುಭವ. ದೈನಂದಿನ ಜೀವನದಲ್ಲಿ ಮಾನವ ಒಂದು ಯಂತ್ರದಂತೆ ಕಾರ್ಯ ನಿರ್ವಹಿಸುತ್ತಾ ಹೋಗುತ್ತಾನಾದರೂ ನಡು ನಡುವೆ ಏನೋ ಒಂದನ್ನು ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ, ಆದರೆ, ಬಾಲ್ಯ ಇದಾವುದರ ಪರಿವೆಯೇ ಇರದ ಒಂದು ಸ್ವಚ್ಛಂದ ಜೀವನ. ಅದಕ್ಕೆ ಯಾವುದರ ಚಿಂತೆಯು ಕಾಡದು. ಅದಕ್ಕೆ ಆಹಾರ ದಕ್ಕಿಸಿಕೊಳ್ಳಬೇಕಾದ ಅನಿವಾರ್ಯತೆ ಇಲ್ಲ. ದುಡಿಯಬೇಕಾದ ದರ್ದು ಇಲ್ಲ. ಆರಾಮವಾಗಿದ್ದುಕೊಂಡು ತಿಂದುಂಡು ಮಲಗಿ ಆಟವಾಡುತ್ತ ಕಾಲಕಳೆದು ಬಿಡುವ ವಯೋಮಾನವದು.... ನೋಡ್ರೀ ಸಾರ್ ನಮ್ಮೂರಲ್ ನಾನೇ ರಾಜ , ನಮ್ ಚಡ್ಡಿ ದೋಸ್ತ್ ಗಳ ಜೊತೆಗೆ ಆಡೋದೇ ಮಜ.... ನಿಜವಾಗ್ಲೂ ಕಣ್ರೀ ಆ ಲೈಫ್ ಎಷ್ಟು ಚಂದ ಅಂದ್ರೆ ಒಂದೆರಡು ಪದಗಳಿಂದ ವರ್ಣಿಸಲು ಆಗಲ್ರೀ.... ನಾನ್ ಚಿಕ್ಕವನಿದ್ದಾಗ ನಮ್ ಬಸವಾನಿ ಶಾಲೆಲ್ ಆಡೋ ಆ ಜಾರೋ ಬಂಡಿ , ಕಳ್ಳ ಪೋಲೀಸ್,ರಾಮನ್ ಚಂಡು ಬೀಮನ್ ಚಂಡು, ಲಗೋರಿ ಹೀಗೆ ಹತ್ತು ಹಲವಾರು ಆಟ ಆಡ್ತಾ ಇದ್ವಿ ಆದ್ರೆ ಈಗ ಈ ಪಬ್ಜಿ , ಲೂಡೋ,ಮಿನಿ ಮಿಲೀಶಿಯಾನೋ ಮಲೇಶಿಯಾನೋ ಅಂತ ಆಟದಲ್ ಈಗಿನ್ ಕಾಲದ್ ಹುಡ್ಗುರ್ ಫುಲ್ ಬ್ಯುಸಿ..... ಆ ಕಾಲದಲ್ ನಾವೆಲ್ಲಾ ನಮ್ ಚಡ್ಡಿ ದೋಸ್ತ್ ಗಳ್ ಜೊತೆಗಲ್ಲಾ ನಮ್ಮೂರು ಗುರುವಳ್ಳಿಯಿಂದ ಬಸವಾನಿ ಸ್ಕೂಲಿಗ್ ಹೋಗೋವಾಗ ನಮ...