ಅವಳು ಮತ್ತು ಪ್ರೀತಿ (Avalu mattu preethi ) by Sandeep Kundadri
ಪ್ರತಿದಿನದಂತೆ ಆ ದಿನ ಹೃದಯದಿಂದ ರಕ್ತಗಳು ನರಗಳ ರಸ್ತೆಯ ಮೂಲಕ ದೇಹದ ಪ್ರತಿಯೊಂದು ಭಾಗಗಳ ಕಾರ್ಯ ವೈಖರಿಯ ಗಮನಿಸಲು ಗಸ್ತು ತಿರುಗಿ ಹೃದಯಕೆ ಹಿಂದಿರುಗುವಾಗ, ಮನಸ್ಸು ಯಾಕೋ ಏನೋ ಕೈಕಟ್ಟಿ ಹೃದಯದ ಹೊಸ್ತಿಲ ಮೇಲೆ ಕುಳಿತು, ತುಂಬಿದ ಕಂಗಳ ಸಹಿತ ಹೃದಯ ಬಾಗಿಲ ನೀಲಗಳಿಗೆ ತಲೆಯವರಗಿ ನೆನಪಿನ ಮೌನದಲೆಗಳ ಮೊರೆತದ ನೋವು ತಾಳಲಾಗದೆ, ಮೌನದ ಅಳು ಎದೆಯ ಮೇಲೆ ಮಲಗಿತ್ತು.
ಸುಯ್ಯ್ ಎಂದು ಗಸ್ತು ತಿರುಗಿ ಬರುತ್ತಿದ್ದ ರಕ್ತವೊಂದು ಈ ದೃಶ್ಯವನ್ನೊಮ್ಮೆ ಕಂಡು ದಿಗ್ಭ್ರಾಂತಿಗೊಳಗಾಗಿ ಒಂದು ಕ್ಷಣ ನಿಂತು ಅರೆ ಮನಸ್ಸಿಗೇನಾಗಿದೆ ದಿನದಂತೆ ಲವಲವಿಕೆಯಿಂದಿಲ್ಲ ಏನಾಗಿರಬಹುದೆಂದು ಎಲ್ಲ ವಾಸ್ತವಗಳ ಗಮನಿಸಿ ಈ ವಿಷಯವ ಹಿಡಿದು ಅವಸರಾವಸರವಾಗಿ ಓಡಿ ಜಲಪಾತದಂತೆ ಹೃದಯಕೆ ಧುಮುಕಿತು.
ಅದಾಗಲೆ ದೇಹದ ಪ್ರತಿಯೊಂದು ಭಾಗದಿಂದಲೂ ಬಂದ ರಕ್ತಗಳ ಗುಂಪು ಏನೋ ಗುಸುಗುಸು ಮಾತಾನಾಡುತ್ತಿದ್ದವು... ಇಲ್ಲಿ ನಡೆದಿರುವ ಪ್ರಸಂಗಗಳ ಬಗ್ಗೆ ತಲೆಕೆಡಿಸಿಕೊಂಡು ವಿಸ್ಮಯದ ಏನೋ ದೂರನ್ನ ಹಿಡಿದು ಹೃದಯದ ಪ್ರತಿಯೊಂದು ಕೋಣೆಗಳ ಕದ ತೆಗೆದು ಒಲವದೇವಿಗಾಗಿ ಹುಡುಕಲಾರಂಭಿಸಿತು... ಹೀಗೆ ಹುಡುಕುವಾಗ ಹೃದಯದ ಎಡ ಅಭಿದಮನಿಯಲ್ಲಿ ಒಲವ ದೇವತೆ ರತ್ನಖಚಿತ ಪ್ರೀತಿ, ವಿಶ್ವಾಸದ ಸಿಂಹಾಸನದಲ್ಲಿ ಆಸೀನಳಾಗಿದ್ದಳು.
ರಕ್ತ ಹೋಗಿ ವಂದನೆ ಸಲ್ಲಿಸಿ ತಾನು ತಂದ ವರದಿಯ ದೂರನ್ನು ವಚನಿಸಿದಾಗ ಒಲವ ದೇವಿ ಒಮ್ಮೆ ಕಂಪಿಸಿದಳು... ನಂತರ
ಈಗಿಂದ ಈಗಲೇ ಬಲಅಪದಮನಿಯ ವಿಚಾರಣಾ ಕೋಣೆಗೆ ಎಲ್ಲರನ್ನ ಬರ ಹೇಳು ಸಮಸ್ತರ ಸಮ್ಮುಖದಲ್ಲಿ ಮನಸ್ಸಿನ ನೋವಿನ ಕಾರಣವನ್ನು ವಿಚಾರಣೆ ನಡೆಸಿ ಪರಿಹಾರ ಸೂಚಿಸುತ್ತೇನೆ ಅದಕ್ಕೂ ಮೊದಲು ನಾ ಹೇಳಿದ್ದೆಂದು ಮಿದುಳಿನ ಅಪ್ಪಣೆ ಪಡೆದು ಮನಸ್ಸನ್ನು ಎಡಾಭಿದಮನಿಯಲ್ಲಿ ನನ್ನ ಭೇಟಿಯಾಗಬೇಕೆನ್ನು ತಡಮಾಡದೆ ವಂದಿಸಿ ರಕ್ತ ಹೃದಯದಿಂದ ಮೆದುಳಿನ ಕಡೆ ಸಂಚರಿಸಿತು...
-ಮುಂದುವರೆಯುವುದು....

Comments
Post a Comment