ನಮ್ ಹಳ್ಳಿ ಲೈಫ್ (Namm Halli Life ) by Nikhil . GM. Gowda
ನೋಡ ನೋಡ ನಮ್ ಹಳ್ಳಿ ಲೈಪ್ ಎಷ್ಟ್ ಚಂದ ಅಲಾ...
ಡಿಯರ್ ಪ್ರೆಂಡ್ಸ್,
ಗ್ರಾಮೀಣ ಬದುಕು ಬಹಳವಾಗಿ ಬದಲಾಯಿಸಿದೆ.ಅಭಿವೃದ್ಧಿ ಗಳಿಂದ ಹಳ್ಳಿಗಳಲ್ಲೂ ಸುಖಜೀವನ ಸಾಧ್ಯವಾಗುತ್ತಿದೆ. ಹಳ್ಳಿಗಳಲ್ಲಿ ಉಸಿರುಕಟ್ಟಿಸುವ ವಾಹನ ದಟ್ಟಣೆ ಇಲ್ಲ. ವಾಯು ಮಾಲಿನ್ಯವಿಲ್ಲ....
ನಮ್ ಕೂಲ್ ಕೂಲ್ ಹಳ್ಳಿ ಲೈಫ್ ಚಂದ ಕಣ್ರೀ...
ಡೆವಲಪ್ಮೆಂಟ್
ಡೆವಲಪ್ಮೆಂಟ್, ಡೆವಲಪ್ಮೆಂಟ್....
ನಮ್ ಹಳ್ಳಿಯ ರೋಡ್ ಗಳಲ್ಲಿ ವೆಹಿಕಲ್ ಗಳು ಹೆಚ್ಚಿದೆ. ಹಳ್ಳಿಯ ಎಲ್ಲಾ ಮನೆಗಳಲ್ಲಿ ಕಾರು ಬೈಕ್ ಗಳು.
ಜನಸಾಮಾನ್ಯರ ಓಡಾಟಕ್ಕೆ ಕೂಡ ಹಳ್ಳಿ ಊರುಗಳಿಗೆ ಬಸ್ಸುಗಳ ಸಂಚಾರ ಹೆಚ್ಚಿದೆ,
ನಮ್ಮೂರಿನ ಸಹಕಾರ ಸಾರಿಗೆ, ಸಹ್ಯಾದ್ರಿ ಬಸ್ ನಂತೆ....
ಈಗಂತೂ ಬಿಡ್ರೀ ಬೌನ್ಸ್ ಬೈಕ್ ಬಂದಿದಾವೆ
ಬುಕ್ ಕರೋ ರೈಡ್ ಕರೋ😂😂 (ಸದ್ಯದಲ್ಲೇ ಶಿವಮೊಗ್ಗದಲ್ಲಿ)
ಅದಲ್ಲದೆ ಗೂಡ್ಸ್ , ಆಟೋ, ಪಿಕಪ್ ಗಳು ಸರಕು ಸಾಗಣೆಗೆ ದೊರೆಯುತ್ತಿವೆ.
ಪ್ರತೀ ಊರಿನಲ್ಲಿ ಶುರುವಾಗಿರುವ ಖಾಸಗಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಮತ್ತು ವಿಸ್ತೃತವಾಗಿ ದೊರೆಯುತ್ತಿರುವ ಕಾಲೇಜ್ ವಿದ್ಯಾಭ್ಯಾಸ,
ಹಳ್ಳಿಯ ಪ್ರತಿಯೊಬ್ಬ ತಂದೆ ತಾಯಿಯರು ಕೂಡ ‘ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು’ ಎಂದು ಡಿಸೈಡ್ ಮಾಡಿರ್ತಾರೆ,
ಇತ್ತೀಚೆಗೆ ನಾನು ನೋಡಿದ ಹಾಗೆ ಈ ನಮ್ಮ ಸರ್ಕಾರಿ ಶಾಲೆಗಳಲ್ಲಿ ಕಾಡಾ ಕ್ಯಾಬ್ ವ್ಯವಸ್ಥೆ ಮಾಡಿದ್ದಾರೆ
ಡೈಲಿ ಯೂನಿಫಾರಂ ಹಾಕಿಕೊಂಡು ಕ್ಯಾಬ್ ನಲ್ಲಿ ಅಥವಾ ನಮ್ ಲೋಕಲ್ ಬಸ್ಸುಗಳಲ್ಲಿ ಶಾಲೆಗೆ ಹೊರಡುತ್ತಿರುವುದು ಡೈಲಿ ನಾವ್ ನೋಡೋ EXCLUSIVE ದೃಷ್ಯ.
ನಮ್ಗೆ ಇವೆಲ್ಲ ಕ್ಯಾಬ್ ಇರ್ಲಿಲ್ಲ ಬಿಡಿ😂😂
ನಮ್ಮೂರು ಗುರುವಳ್ಳಿಯಿಂದ ಬಸವಾನಿ ಸ್ಕೂಲಿಗ್ ಹೋಗೋವಾಗ ನಮ್ಮ ಈ ಹೂವಲ್ ಗಾಡಿ ಚಕ್ರ ಮಾಡೋದು ಮಂಗನ್ ಬಳ್ಳಿ ಲಿ ಬಸ್ ಆಟ
ಇದೇ ನಮ್ಗೆ ಬಸ್ಸು ಕಾರು 🚌🚗 🚗😍😍
ಹಾಗೆ
ಸಾಮಾನ್ಯವಾಗಿ ಗ್ರಾಮೀಣ ಜನರು ಬೇಗನೆ ಮಲಗಿ ಬೇಗನೆ ಎದ್ದು ತಮ್ಮ ತೋಟ ಗದ್ದೆಗಳ ಕೆಲಸ ಶುರು ಮಾಡಿಕೊಳ್ಳುತ್ತಿದ್ರು.
ಹಳ್ಳಿಗಳು ಸಾಯಂಕಾಲ ಎಂಟು ಎಂಟೂವರೆ ಗಂಟೆಗೆ ನಿದ್ರೆ ಮಾಡೋ ಕಾಲವೊಂದಿತ್ತು. ಆಮೇಲೆ ಬಂತು ನೋಡಿ ಹಳ್ಳಿ ಹಳ್ಳಿಗೂ ಕರೆಂಟ್.
ಸ್ವಲ್ಪ ಹರಟೆ ಹೊಡೆಯುತ್ತಾ, ರೇಡಿಯೋ ಟೇಪ್ ರೆಕಾರ್ಡರ್ ಲಿ ಒಳ್ಳೇ ಹಾಡು ಕೇಳಿ ಸ್ವಲ್ಪ ಲೇಟ್ ಆಗಿ ತಾಚಿ ಮಾಡ್ತಾ ಇದ್ವಿ😄.
ಆಮೇಲೆ ಬಂತು ನೋಡ್ರೀ ಟೀವಿ, ಆ ಧಾರಾವಾಹಿ ಬಂದ್ವು
ಅಬ್ಬಾ ದೇವ್ರೇ
ಗುಪ್ತಗಾಮಿನಿ, ಮುಕ್ತ ಮುಕ್ತ, ಬದುಕು, ಮನೆಯೊಂದು ಮೂರು ಬಾಗಿಲು ಅಂತ ಬಂದು
ನೆಮ್ಮದಿಯ ಜೀವನ ಊರು ಬಾಗಿಲಾಯ್ತು...
ಇವಾಗ್ ಬರ್ತಾ ಇದೆ ನೋಡಿ ಪುಟ್ಟಗೌರಿ ಮದುವೆ, ಜೊತೆ ಜೊತೆಯಲಿ.....
ಈ ಧಾರಾವಾಹಿ ಹಾವಳಿಗೆ ಪೇಟೆಯ ಮನೆಗಳಂತೆಯೇ ಹಳ್ಳಿಮನೆಗಳ ಕ್ರಮ ಕೂಡಾ ಬದಲಾದವು. ಪೇಟೆಯಾಗಲೀ, ಹಳ್ಳಿಯಾಗಲೀ, ಶಾಲೆಗೆ ಹೋಗದ ಚಿಕ್ಕ ಮಗು ಕೂಡಾ ರಾತ್ರಿ ಹನ್ನೊಂದರ ತನಕ ಜಾಗರಣೆ ಮಾಡುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ.....
ಇದ್ರ ಮದ್ಯೆ ಮಿನಿ ಮಿಲೀಶಿಯಾ ನೋ ಮಲೇಶಿಯಾನೋ ಅಂತ ಗೇಮ್ ಬೇರೆ ಮರ್ರೆ ಹಾ ಹಾ.... ಪಬ್ಜಿ ಬೇರೆ ಕರೆಕ್ಟು😄
ನಮ್ ಹಳ್ಳಿಲಿ ಕೂಡಾ ರಾತ್ರಿ ತಡವಾಗಿ ಮಲಗುವುದರಿಂದ ಬೆಳಗ್ಗೆ ಬೇಗನೇ ಏಳುವ ಹವ್ಯಾಸ ಕೂಡಾ ಹಳ್ಳಿಗಳಲ್ಲಿ ದೂರವಾಗುತ್ತಿದೆ. ಬೆಳಗಿನ ಜಾವಕ್ಕೇ ಎದ್ದೇಳುತ್ತಿದ್ದ ಎಲ್ರೂ ಜನರು ಸೂರ್ಯ ದರ್ಶನವಾದ ಮೇಲೆಯೇ ಏಳುವುದು ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣುತ್ತಿದೆ☺
ಈಗ ಗ್ರಾಮೀಣ ಪ್ರದೇಶದ ಹೆಚ್ಚಿನ ಮನೆಗಳಲ್ಲಿ ದನ ಕರುಗಳೇ ಇಲ್ಲ. ಇದ್ದರೂ ಅನಿವಾರ್ಯವಾಗಿ ಸಾಕಿಕೊಂಡ ಒಂದೆರಡು ದನಕರುಗಳು ಮಾತ್ರ.
ಹಾಲು ಬೇಕಾದ್ರೆ ಡೈರಿಲಿ ಸಿಗುತ್ತೆ ತೋಟ ಗದ್ದೆಗೆ ಗೊಬ್ಬರ ಅದೂ ಸಿಗುತ್ತೆ ನಮ್ ಊರ್ ಗಳಲ್ಲಿ.... ಇನ್ ಏನ್ ಬೇಕ್ ಹೇಳ್ರೀ.....
ಇವಾಗ್ ನೋಡಿ ಈ ಅಡುಗೆಗೆ ಸೌದೆ ಒಲೆ ಬದಲಾಗಿ ಎಲೆಕ್ಟ್ರಾನಿಕ್ ಉಪಕರಣಗಳು, ವಿದ್ಯುತ್ ಒಲೆ, ಗ್ಯಾಸ್ ನ ಬಳಕೆ ಈಗ ಹೆಚ್ಚುತ್ತಿದೆ.
ಗದ್ದೆ ಹೂಡಲು ಟ್ರ್ಯಾಕ್ಟರ್ ಇಲ್ಲ ಅಂದ್ರೆ ಟಿಲ್ಲರ್ ಇದೆ. ಕೊಟ್ಟಿಗೆ ಗೊಬ್ಬರ ಇಲ್ಲ ಅಂದ್ರೆ ಏನ್ ಹೇಳಿ
‘ರಾಸಾಯನಿಕ ಗೊಬ್ಬರ (DAP, POTASH, SUPALA , ಗೌರ್ನಮೆಂಟ್ ಗೊಬ್ರ ನಮ್ಮೂರ್ ಬಾಷೆಲಿ) ಗದ್ದೆಗೆ ಚೆಲ್ಲಿದರಾಯಿತು’ ಎಂಬ ಮನೋಭಾವ ಹಳ್ಳಿಗಳಲ್ಲಿ ಕಾಣುತ್ತಿದೆ.
ರಸ್ತೆ ಸಂಪರ್ಕ ಉತ್ತಮಗೊಂಡಿದ್ದು ವಾಹನಗಳ ಸಂಖ್ಯೆ ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಅಂಗಡಿಗಳಲ್ಲಿ ಈಗ ಉತ್ತಮ ಗುಣ ಮಟ್ಟದ ದಿನಸಿ, ಬಟ್ಟೆಬರೆ, ನಿತ್ಯೋಪಯೋಗಿ ವಸ್ತುಗಳು ಮತ್ತು ಉತ್ತಮ ತರಕಾರಿ ದೊರೆಯುತ್ತಿವೆ. ಇದರಿಂದಾಗಿ ಹಳ್ಳಿಗಳಲ್ಲಿ ಹಿಂದಿನಂತೆ ಮನೆಗೆ ಬೇಕಾದ ತರಕಾರಿ ಬೆಳೆಯುವ ಹವ್ಯಾಸ ಕಡಿಮೆಯಾಗುತ್ತಿದೆ.
ಹಿಂದಿನ ಕಾಲದ ಬೀಸುವ ಕಲ್ಲು, ರುಬ್ಬುವ ಕಲ್ಲು, ಒರಳು ಒನಕೆಗಳೆಲ್ಲಾ ಹೆಚ್ಚಿನ ಗ್ರಾಮೀಣ ಮನೆಗಳಲ್ಲಿ ಮೂಲೆ ಸೇರಿವೆ. ಹಳ್ಳಿ ಪ್ರದೇಶಗಳಲ್ಲಿಯೂ ಅಕ್ಕಿ ಗಿರಣಿಗಳು, ಹಿಟ್ಟಿನ ಮಿಲ್ಲುಗಳು ಇವೆ. ಹೆಚ್ಚಿನ ಮನೆಗಳಲ್ಲಿ ಮಿಕ್ಸಿಗಳು ‘ಗ್ರೈಂಡರ್’ ಗಳು ನಿತ್ಯ ಬಳಕೆಯಲ್ಲಿವೆ.
ಅದೇನೇ ಇರ್ಲಿ ಈ ಎಲ್ಲಾ ಅಭಿವೃದ್ಧಿ ಗಳಿಂದ ಹಳ್ಳಿಗಳಲ್ಲೂ ಸುಖಜೀವನ ಸಾಧ್ಯವಾಗುತ್ತಿದೆ. ಇದು ತುಂಬಾ ಸಂತೋಷಕರ ಬೆಳವಣಿಗೆ. ಹಳ್ಳಿಗಳಲ್ಲಿ ಉಸಿರುಕಟ್ಟಿಸುವ ವಾಹನ ದಟ್ಟಣೆ ಇಲ್ಲ. ವಾಯು ಮಾಲಿನ್ಯವಿಲ್ಲ....
ನಮ್ ಕೂಲ್ ಕೂಲ್ ಹಳ್ಳಿ ಲೈಫ್ ಚಂದ ಕಣ್ರೀ...
ಇಂತಿ ನಿಮ್ಮವ....

Comments
Post a Comment